College Campus

Tuesday, 21 November 2017

HARI BALAJAGATH 2017 - Mini Sports Fest

                      "ಕ್ರೀಡೆಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಸದೃಢತೆ ಸಹಕಾರಿಯಾಗಿರುತ್ತವೆ” - ಕುಮಾರಿ. ಖುಷಿ

                 ನಗರದ ಬೋಗಾದಿಯಲ್ಲಿರುವ ಹರಿ ವಿದ್ಯಾಲಯ ಶಾಲೆಯಲ್ಲಿ ಮೈಸೂರು ನಗರದ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ "ಹರಿ ಬಾಲಜಗತ್-2017' ಹೆಸರಿನಡಿಯಲ್ಲಿ ದಿನಾಂಕ 12.11.2017ರಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸ್ವಚ್ಛಭಾರತ ಅಭಿಯಾನದ ರಾಯಭಾರಿಯೂ ಹಾಗೂ ಅಂತರರಾಷ್ಟ್ರೀಯ ಯೋಗ ಪಟುವಾದ ಕುಮಾರಿ ಖುಷಿರವರು ಆಗಮಿಸಿ, "ಕ್ರೀಡೆಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಸದೃಢತೆ ಸಹಕಾರಿ ಹಾಗೂ ಸ್ವಚ್ಛಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು'' ಎಂದು ಹೇಳಿದರು.
                ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ "ಹರಿ ಬಾಲಜಗತ್-2017' ಕಾರ್ಯಕ್ರಮದಲ್ಲಿ ಕಾಂಗರೂ ಓಟ, ಬಲೂನುಗಳನ್ನು ಒಡೆಯುವ ಆಟ, ಬಣ್ಣ ಬಣ್ಣ ಕಲ್ಲುಗಳನ್ನು ಹೆಕ್ಕುವ ಆಟ ಹೀಗೆ ವಿವಿಧ ರೀತಿಯ ಆಟಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಶಾಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಬೋಧಕ-ಬೋಧಕೇತರ ಸಿಬ್ಬಂದಿಯವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
                










































No comments:

Post a Comment