College Campus

Wednesday, 5 September 2018

CELEBRATION OF TEACHERS DAY


ಎಲ್ಲ ದಾನಗಳಲ್ಲಿ ವಿದ್ಯಾದಾನವೇ ಶ್ರೇಷ್ಠದಾನ
-ಡಾ. ಎಸ್. ವಿಜಯ ರಾಘವನ್, ಎಂಬಿಬಿಎಸ್, ಎಂ.ಡಿ
ಭವಿಷ್ಯ ಭಾರತವನ್ನು ರೂಪಿಸುವ ಜವಬ್ದಾರಿ ಹೊತ್ತ ಶಿಕ್ಷಕರು ಆ ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದಾರೆ. ವಿದ್ಯಾದಾನವೇ ಶ್ರೇಷ್ಟವಾದುದು ವಿದ್ಯಾರ್ಥಿಗಳು ಶಿಕ್ಷಕರಿಗೆ ವಿಧೇಯರಾಗಿ, ಪರಿಶ್ರಮದಿಂದ ಕಲಿಕೆಯಲ್ಲಿ ತೊಡಗಬೇಕು. ಕಲಿಯುವ ಮತ್ತು ಕಲಿಸುವ ಶಿಕ್ಷಣ ಸಾರ್ಥಕವಾಗಬೇಕಾದರೆ ಶಿಸ್ತು, ಗೌರವಗಳು ಇರಬೇಕು.ಶಿಕ್ಷಣ ಎಂದರೆ ಶಿಸ್ತು ಧೈರ್ಯ, ಮತ್ತು ಗೌರವಗಳನ್ನು ಕಲಿಸುವುದುಎಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ಬೋಗಾದಿಯ ಹರಿವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಎಸ್. ವಿಜಯ ರಾಘವನ್, ಡೀನ್, ವೈದ್ಯಕೀಯ ಶಿಕ್ಷಣ ವಿಭಾಗ, ಮೈಸೂರು ವಿಶ್ವವಿದ್ಯಾಲಯ ಅವರು ಮಾತನಾಡುತ್ತಾ ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಹಲವು ಕ್ರೀಡೆಗಳನ್ನು ಏರ್ಪಡಿಸಿದ್ದರು ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ಕೆ.ವಿ. ಸತ್ಯನ್ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ಼ಚ್.ಆರ್.ಭಗವಾನ್, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯಿನಿಯರು, ಶಿಕ್ಷಕ -ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






































No comments:

Post a Comment