“ಕ್ರೀಡೆಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸುತ್ತದೆ”
      -ಕುಮಾರಿ
ಧನುಷಾ, ಅಂತರಾಷ್ಟ್ರೀಯ ಕ್ರೀಡಾಪಟು
          
“ವಿದ್ಯಾರ್ಥಿಗಳು ಪಠ್ಯ ಕಲಿಕೆಯ
ಜೊತೆ ಪಠ್ಯೇತರ ಚಟುವಟಿಕೆಗಳಾದ
ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ
ತಮ್ಮನ್ನು ತೊಡಗಿಸಿಕೊಂಡಾಗ ಮಾನಸಿಕವಾಗಿ
ಸದೃಢರಾಗಿ ಉತ್ತಮ ವ್ಯಕ್ತಿಗಳಾಗಿ
ರೂಪುಗೊಳ್ಳಲು ಸಾಧ್ಯವಾಗುತ್ತದೆ. ಸ್ಪರ್ಧಾಮನೋಭಾವನೆ ಹೊಂದಿದಾಗ ಕ್ರಿಯಾಶೀಲತೆ
ಹೊರಹೊಮ್ಮುತ್ತದೆ” ಎಂದು
ನಗರದ ಬೋಗಾದಿಯಲ್ಲಿರುವ ಹರಿವಿದ್ಯಾಲಯವು
ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಹಾಗೂ ‘ಪ್ರತಿಭಾನ್ವೇಷಣೆ’ಯ ಬಹುಮಾನ  ವಿತರಣಾ ಸಮಾರಂಭಕ್ಕೆ
ಮುಖ್ಯ ಅತಿಥಿಗಳಾಗಿ ಆಗಮಿಸಿದ
ಅಂತರಾಷ್ಟ್ರೀಯ ಕ್ರೀಡಾಪಟು ಕುಮಾರಿ
ಧನುಷಾ ರವರು ಹೇಳಿದರು.
          
ಹರಿವಿದ್ಯಾಲಯವು ‘ಪ್ರತಿಭಾನ್ವೇಷಣೆ’ ಹೆಸರಿನಡಿಯಲ್ಲಿ ಸಾಂಸ್ಕೃತಿಕ,
ಶೈಕ್ಷಣಿಕ ಮತ್ತು ಕ್ರೀಡಾಸ್ಪರ್ಧೆಗಳನ್ನು ವಿವಿಧ ತರಗತಿಯ
ವಿದ್ಯಾರ್ಥಿಗಳಿಗೆ 
ನಡೆಸಿ, ಅವರಲ್ಲಿ ಹುದುಗಿರುವ  ಪ್ರತಿಭೆಯನ್ನು ಅನಾವರಣಗೊಳಿಸುವ
ವೇದಿಕೆಯನ್ನು  ಕಲ್ಪಿಸಿಕೊಟ್ಟಿತ್ತು. ಅದರಲ್ಲಿ ವಿಜೇತರಾದ
ಪೂರ್ವ ಪ್ರಾಥಮಿಕ ಮತ್ತು
ಪ್ರಾಥಮಿಕ ಶಾಲೆಯ 5 ನೇ ತರಗತಿಯವರೆಗಿನ
ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು  ವಿತರಿಸಲಾಯಿತು.
            ಈ ಕಾರ್ಯಕ್ರಮದಲ್ಲಿ ಹರಿವಿದ್ಯಾಲಯದ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ್ ಹೊಸಮನೆ ರವರು, ಪ್ರಾಂಶುಪಾಲರಾದ ಶ್ರೀ.ಶ್ರೀವತ್ಸರವರು, ಮುಖ್ಯೋಪಾಧ್ಯಾಯಿನಿಯರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment