College Campus

Monday, 5 November 2018

Celebration of Kannada Rajyothsava

“ಭಾಷೆ ಎಂಬುದು ಜೀವಂತಿಕೆಯ ಕುರುಹು, ಭಾಷಾಭಿಮಾನ ಬೆಳೆಸಿಕೊಳ್ಳಿ”
                                              -ಡಾ.ಲಕ್ಷ್ಮೀನಾರಾಯಣ್ ಅರೋರ, ನಿವೃತ್ತ ಪ್ರಾಧ್ಯಾಪಕರು ಮತ್ತುಅಧ್ಯಕ್ಷರು,ಪ್ರಸಾರಾಂಗ ಮೈಸೂರು.
            “ಕರ್ನಾಟಕದ ಹಬ್ಬದ ಈ ದಿನದಲ್ಲಿ ನಾವೆಲ್ಲರೂ ಕನ್ನಡ ನಾಡು, ನುಡಿಗೆ ಗೌರವ ನೀಡಬೇಕು.ಆಚರಣೆಗಳು ಆಚರಣೆಗಷ್ಟೇ ಸೀಮಿತವಾಗಿರದೆ ಹೊಸ ಭರವಸೆಗಳನ್ನು ಹುಟ್ಟು ಹಾಕುವಂತಿರಬೇಕು. ಮಾತೃಭೂಮಿ ,ಧರ್ಮ, ಭಾಷೆ ಈ ಮೂರು ಅಂಶಗಳಿಗೆ ಒತ್ತು ನೀಡಿ ಬದುಕು ನಡೆಸಬೇಕಾಗಿದೆ. ಭಾಷೆ ಎಂಬುದು ಜೀವಂತಿಕೆಯ ಕುರುಹು ಪ್ರತಿಯೊಬ್ಬರು ಆ ಭಾಷಾಭಿಮಾನ ಬೆಳೆಸಿ ನಾಡಿಗೆ ಒಳಿತು ಮಾಡಬೇಕು. ಕೃತಕ ಕನ್ನಡಕ್ಕಿಂತ ಸಹಜ ಕನ್ನಡ ಮಾತಾಡಿ” ಎಂದು ಬೋಗಾದಿಯಲ್ಲಿರುವ ಹರಿವಿದ್ಯಾಲಯ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಲಕ್ಷ್ಮೀನಾರಾಯಣ್ ಅರೋರ, ನಿವೃತ್ತ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು, ಪ್ರಸಾರಾಂಗ ಮೈಸೂರು ರವರು ಮಾತನಾಡುತ್ತ ಹೇಳಿದರು.
             ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು  ಕನ್ನಡ ನಾಡು ನುಡಿಗೆ ಸಂಬಂದಿಸಿದ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸಂಸ್ಥೆಯ ಕನ್ನಡ ಅಧ್ಯಾಪಕರಾದ ಶ್ರೀಯುತ ಪ್ರಸನ್ನ ಮೋಹನ ಮಡಿವಾಳ ಅವರು ಸಂಸ್ಥೆಗೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು
             ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀ ಎ಼ಚ್.ಆರ್.ಭಗವಾನ್ ವಹಿಸಿದ್ದರು. ,ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯಿನಿಯರು, ಶಿಕ್ಷಕ-ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







































No comments:

Post a Comment